ಮೆಲ್ಲುಸಿರೇ ಸವಿಗಾನ

ವೀರಕೇಸರಿ
ಘಂಟಸಾಲ, ಪಿ. ಸುಶೀಲ
ಘಂಟಸಾಲ

ಮೆಲ್ಲುಸಿರೇ ಸವಿಗಾನ

ಎದೆ ಝಲ್ಲನೆ ಹೂವಿನ ಬಾಣ || ಪ ||

ಮನದಾಚೆ ದೂಡಿದ ಬಯಕೆ

ಕನಸಾಗಿ ಕಾಡುವುದೇಕೆ

ಮಧು ಮಂಚಕೆ ವಿಧಿ ಹಂಚಿಕೆ

ಅದಕೇಕೆ ಅಂಜಿಕೆ ಶಂಕೆ? || ೧ ||

ವಿದಹಾಗ್ನಿ ನಿನ್ನೆದೆ ಸುಡಲು

ಬೆಳದಿಂಗಳಾಯಿತು ಬಿಸಿಲು

ಹೋರಾಡಿದೆ ಹಾರಾಡಿದೆ

ಹಾರೈಸಿ ಪ್ರೆಮದ ಹೊನಲು || ೨ ||

ಈ ದೇಹದ ರಸಮಯ ಸದನ

ಈ ನೇಹ ಮಧು ಸಂಗ್ರಹಣ

ಚಿರನೂತನ ರೋಮಾಂಚನ

ದಾಂಪತ್ಯದನು ಸಂದಾನ || ೩ ||

ವೀರಕೇಸರಿ

ಚಿತ್ರ ನೋಡಿ